ವೆಲ್ಲೂರು ಮಟನ್ ಫ್ರೈ

Spread The Taste
Serves
4
Preparation Time: 20 ನಿಮಿಷಗಳು
Cooking Time: 30 ನಿಮಿಷಗಳು
Hits   : 1830
Likes :

Preparation Method

  • ಮಟನ್ ನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ.
  • ಅರಿಶಿನ ಪುಡಿ ಮತ್ತು ಉಪ್ಪು ಹಾಕಿ ಮಟನ್ ನ್ನು ಕುಕ್ಕರ್ನಲ್ಲಿ ಬೇಯಿಸಿ ಕೊಳ್ಳಿ.
  • ಅತಿಯಾಗಿ ಬೇಯಿಸ ಬೇಡಿ.
  • ಕೆಂಪು ಮೆಣಸಿನಕಾಯಿ ಮುರಿದುಕೊಳ್ಳಿ.
  • ಸಣ್ಣಗೆ ಕಿರು ಈರುಳ್ಳಿ ಹಚ್ಚಿಕೊಳ್ಳಿ.
  • ಸೋಂಪು ಮತ್ತು ಜೀರಿಗೆ ಎಣ್ಣೆ ಹಾಕದೆ ಹುರಿದುಕೊಳ್ಳಿ. ಇದನ್ನು ತಣ್ಣಗಾಗಲು ಬಿಡಿ. 
  • ಇದನ್ನು ನೀರಿನ ಜೊತೆಗೆ ನುಣ್ಣಗೆ ರುಬ್ಬಿಕೊಳ್ಳಿ.
  • ಇಧಯಂ ಎಳ್ಳೆಣ್ಣೆಯನ್ನು ಪ್ಯಾನ್ನಲ್ಲಿ ಬಿಸಿ ಮಾಡಿ.
  • ಕರಿಬೇವಿನ ಸೊಪ್ಪು, ಕೆಂಪು ಮೆಣಸಿನಕಾಯಿ ಮತ್ತು ಉದ್ದಿನ ಬೇಳೆ ಸೇರಿಸಿ ಹುರಿಯಿರಿ.
  • ಕೈಯಾಡಿಸಿ ಈರುಳ್ಳಿ ಹುರಿಯಿರಿ.
  • ಮಟನ್ ನ್ನು ಹಾಕಿ ಚೆನ್ನಾಗಿ ಬೆರೆಸಿ.
  • ಮೆಣಸಿನ ಪುಡಿ, ರುಬ್ಬಿದ ಸೋಂಪು-ಜೀರಿಗೆ ಪೇಸ್ಟ್ ಸೇರಿಸಿ.
  • ಉಪ್ಪು ಹೊಂದಿಸಿ.
  • ಮಟನ್ ಕೆಂಪು ಬಣ್ಣ ಬಂದಾಗ ಬೆಂಕಿಯಿಂದ ತೆಗೆದುಹಾಕಿ ಬಡಿಸಿರಿ.
Engineered By ZITIMA