ಪನೀರ್ ಟಿಕ್ಕಾ

Spread The Taste
Serves
3
Preparation Time: 2 ಗಂಟೆ 30 ನಿಮಿಷಗಳು
Cooking Time: 30 ನಿಮಿಷಗಳು
Hits   : 1587
Likes :

Preparation Method

  • ಪನೀರ್ ಕ್ಯೂಬ್ ಗಳಾಗಿ ಹಚ್ಚಿಕೊಳ್ಳಿ.
  • ಕ್ಯಾಪ್ಸಿಕಂ ಬೀಜ ತೆಗೆದು ತ್ರಿಕೋನಾಕಾರಕ್ಕೆ ಹಚ್ಚಿಕೊಳ್ಳಿ.
  • ಮೊಸರು ಕಡೆದು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಓಂ ಕಾಳು, ಕಪ್ಪು ಉಪ್ಪು, ನಿಂಬೆ ರಸ, ಅಂಚುರ್ ಪುಡಿ, ಗರಂ ಮಸಾಲಾ, ಜೀರಿಗೆ ಪುಡಿ, ಧನಿಯಾ ಪುಡಿ, ಅರಿಶಿನ ಪುಡಿ, ಕಾಶ್ಮೀರಿ ಮೆಣಸಿನ ಪುಡಿ, ಕ್ಯಾಪ್ಸಿಕಂ, ಪನೀರ್ ಸೇರಿಸಿ ಎರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
  • ಲೋಹದ ಕಂಬಿಗೆ ಕ್ಯಾಪ್ಸಿಕಂ ಮತ್ತು ಪನೀರ್ ಪರ್ಯಾಯವಾಗಿ ತೂರಿಸಿ.
  • ಬೆಣ್ಣೆಯೊಂದಿಗೆ ಬೇಕಿಂಗ್ ತಟ್ಟೆ ಸವರಿಕೊಳ್ಳಿ.
  • ಬೇಕಿಂಗ್ ತಟ್ಟೆ ಮೇಲೆ ಲೋಹದ ಕಂಬಿ ಇಡಿ.
  • ಪನೀರ್ ತುಣುಕುಗಳಿಗೆ ಇಧಯಂ ಎಳ್ಳೆಣ್ಣೆ ಬ್ರಷ್ ಮಾಡಿ.
  • ಓವೆನ್ ನಲ್ಲಿ ಬೇಕಿಂಗ್ ತಟ್ಟೆ ಇರಿಸಿ.
  • ಹತ್ತು ನಿಮಿಷ ಬೇಕ್ ಮಾಡಿ. ಕಂಬಿ ತಿರುಗಿಸಿ, ಬೆಣ್ಣೆಯೊಂದಿಗೆ ಬ್ರಷ್ ಮಾಡಿ.
  •  ಓವೆನ್ ನಿಂದ ತೆಗೆದುಹಾಕಿ.
  • ಒಂದು ತಟ್ಟೆಯಲ್ಲಿ ಪನೀರ್ ತುಣುಕುಗಳನ್ನು ಜೋಡಿಸಿ ಚಾಟ್ ಮಸಾಲಾ ಸಿಂಪಡಿಸಿ ಮತ್ತು ಬಿಸಿಯಾಗಿ ಬಡಿಸಿ. 
Engineered By ZITIMA